Saturday, October 19, 2013

ದೇಶ-ಕೋಶ


                                              ದೇಶ-ಕೋಶ

ದೇಶ ಸುತ್ತಿ ನೋಡೆಂದರು;ಸುತ್ತಿ ಸುಳಿದಾಡುವದರಲ್ಲಿಯೇ ಸಮಯ ಸವೆಸಿದೆ- ಸುಸ್ತಾದೆ,
ಪರರು ಹುಬ್ಬೇರಿಸಿ ನೋಡುವಂತದ್ದನ್ನೇನೂ ನಾ ಮಾಡಲಿಲ್ಲ |
ಕೋಶ ಓದೆನ್ನುವದ ಕೇಳಿ;ಕೋಶಗಳ ಕೆದಕುವದರಲ್ಲಿಯೇ ಮಾಡಿದೆ ಕಾಲಹರಣ,
ನಾಕು ಸಾಲು ಗೀಚಲಾಗಲಿಲ್ಲ; ಅದುವೆನಾ ಕಾರಣ? ||

ಬರೀ ದೇಶ ಸುತ್ತಾಡಿದರೆ ಸಾಕಾ?;
ಕಂಡದ್ದೆಲ್ಲವ ಕೂಡಿಸಿ, ದೇಶವೇ ನೋಡುವಂತೆ ಏನಾದರೂ ಮಾಡಬೇಕಾ? |
ಕುರುಡನಂತೆ ಕೋಶಗಳ ಕೈಯ್ಯಾಡಿಸಿದರೆ ಮುಗಿಯಿತೇ?;
ಕೆಲವರಾದರೂ ಕನ್ನಾಡಿಸುವಂತೆ ಬರೆಯಬಾರದೇ, ಕತೆ-ಕವಿತೆ? ||

ದೇಶ ಸುತ್ತಿ ಬಂದ ಧಿಮಾಕಿನ ಜೊತೆ ಇರಲಿ ಸುತ್ತಿ ಬಂದ ದೇಶದ ಧಿಮಾಕು;
ಧಿಮಾಕದು ಹೊಸತನದ ಚಿಗುರಿನ ಚಿಲುಮೆಯಾಗಬೇಕು |
ಕೋಶ ಓದುವದಲ್ಲ; ಓದಿ ಗ್ರಹಿಸುವದಷ್ಟೇ ಅಲ್ಲ;
ಗ್ರಹಿಸಿದುದ ಜೀವನದಿ ಗುಣಿಸಿದಾಗಲೇ ಗೆಲುವು, ಇಲ್ಲದಿರೆ ಎನಿಲ್ಲ ಓದಿ ಫಲವು ||

Sunday, January 13, 2013


ಅತ್ತ ಗಡಿಯಲ್ಲಿ ಹೊಡೆದಾಡ್ ತಾರೆ ಸೈನಿಕರು; ಯಾಕೆ ಅಂತಾ ಅವರಿಗೇ ಗೊತ್ತಿಲ್ಲಾ
ಇತ್ತ ಗುಜರಾತ್ ಸಮಿತ್ ಅಲ್ಲಿ ಸಾಗರದಂತ ಬಂಡವಾಳ; ಉದ್ಯೋಗವಕಾಶ ಮಾತ್ರ ಸುಧಾರಿಸಿಲ್ಲ
ಭ್ರಷ್ಟಾಚಾರ ಅಂತ ಬೊಬ್ಬಿಡ್ ತಾರೆ, ರಸ್ತೆಗಿಳಿತಾರೆ ಹಜಾರೆ-ಕೇಜ್ರಿವಾಲ
ದೆಹಲಿಯಲ್ಲಿ ಮಾನವೀಯತೆ ಸತ್ತಾಗ ಎಲ್ಲೊದ್ರೊ ಗೊತ್ತಿಲ್ಲ
ಒಂದೆರಡು ಫೆಸ್ ಬುಕ್ ಸ್ಟೆಟಸ್ ಗಾಗಿ ಅಷ್ಟೆಲ್ಲ ಮಾತಾಡಿದರಲ್ಲ
ಈಗ ಇಷ್ಟೆಲ್ಲ ನಡೀತಿದ್ರು ಸಮಾಜಕ್ಕೊಂದು ಸಂದೇಶ ಕೊಡೊ ವ್ಯವಧಾನನೂ ಇಲ್ಲ
ಮಾತು ಬರದ ಮಂತ್ರಿ- ಮುಖ ತೊರಿಸದ ರಾಜ;
ಪತಿಯಿಲ್ಲದ ವಿಧವೆಯಾಗಿದೆ ರಾಷ್ಟ್ರ- ಜನ ಸಾಮನ್ಯ ಎಲ್ಲವನ್ನೂ ಕಂಡು ಸುಮ್ಮನಿರುವ ಧೃತರಾಷ್ಟ್ರ