Sunday, August 2, 2009

ಈ ಕವಿತೆ ಬರೆದಿರುವುದು ನನ್ನ ತಂಗಿಯ ನೆನಪಿನಲ್ಲಿ
ಅರ್ಪಿತವಾಗುತ್ತಿರುವುದು ಈ ನಿನ್ನ ಮಡಿಲಲ್ಲಿ
ನಿನಗಿದು ತಿಳಿದಿದೆಯೋ ಗೆಳೆಯ,
ಈ ದಿನ ರಕ್ಷಾ ಬಂಧನ;
ಅಣ್ಣ-ತಂಗಿಯರ ಪ್ರೀತಿ ಅಕ್ಕರೆಯ ಮಿಲನ ||
ದಿನವೂ ಬರುತ್ತಿತ್ತು ಮುದ್ದು ತಂಗಿಯ ನೆನಪು
ಆದರಿಂದದು ಬೀರುತ್ತಿದೆ ನೂರ್ಮಡಿಯ ಕಂಪು |
ಪವಿತ್ರ ದಿನಗಳಲ್ಲೊಂದು ಈ ರಕ್ಷಾ ಬಂಧನ,
ನಾವಿಂದು ತೊಡಬೇಕು ರಕ್ಷಣೆಯ ಕಂಕಣ ||
ನಮ್ಮ ಕೈ ಸುತ್ತಿರುವುದು ಒಂದು ಸಾಮಾನ್ಯ ದಾರ,
ಆದರದರ ಶಕ್ತಿಯದು ಅಪಾರ ||
ಅಣ್ಣ-ತಂಗಿಯ ಜನುಮವದು ದೈವ-ಆಶಯ
ಇದು ಎಲ್ಲರೂ ಏರ-ಬಯಸುವ ಪವಿತ್ರ ಮಲಯ |
ಆ ಮಲಯಮಾರುತವಾಗಿರಬೇಕು ಎಂದಿಗೂ ಆಹ್ಲಾದಕರ,
ಅದಾಗಬಾರದು ಆ ಮಲಯ ಜೀವಕ್ಕೆ ಭಾರ ||
ಯಾರಿಲ್ಲದಿದ್ದರೇನು ಆ ಭಾರತ ಮಾತೆಯೇ ನಮ್ಮ ಸಹೋದರಿ
ಅವಳ ರಕ್ಷಿಸುವುದೇ ನಮ್ಮ ಪ್ರಥಮ ಜವಾಬ್ದಾರಿ |
ನಿನಗೆಂದಿಗೂ ಇರಲಿ ಈ ಬಂಧನದ ಜಯಭೇರಿ,
ಪ್ರಾರ್ಥಿಸುತ್ತೆನೆ ನಿನಗೆ ಶುಭವನ್ನು ಕೋರಿ ||
ನಾವಿಬ್ಬರು ದೂರವಾಗಿರುವೆವು ಈ ದಿನ,
ನಮ್ಮ ಭಾವನೆಗಳ ಕೂಡುತಿದೆ ಈ ರಕ್ಷಾ-ಬಂಧನ
ಅದಕ್ಕಾಗಿಯೇ ತೇಲಿ ಬಿಟ್ಟಿರುವೆ ಈ ಕವನ
ಮುಳುಗಿ ಹೋಗುವ ಭಯವಿದೆ ಜೋಪಾನ ||

ಜೀವನವೆಂಬ ಪಯಣದಲ್ಲಿ
ಫ಼್ರೆಂಡ್ ಎಂಬ ಶಿಪ್ ನ್ನು ಏರಿ
ನಂಬಿಕೆ ಎಂಬ ಇಂಧನವ ಉಪಯೋಗಿಸಿ
ನಾವೆಂಬ ಇಬ್ಬರು ನಾವಿಕರಾಗಿ
ಹೃದಯವೆಂಬ ದಿಕ್ಸೂಚಿಯಂತೆ ಮುನ್ನಡೆಯುತ್ತ
ಕಷ್ಟ-ಕಾಮಗಳೆಂಬ ಅಲೆಗಳ ದಾಟುತ್ತ
ಫ಼್ರೆಂಡ್ ಶಿಪ್ ಎಂಬ ಸಾಗರವ ತೇಲಿದಾಗ
ಆ ದಡದಲ್ಲಿ ನಮಗಾಗಿ ಸ್ನೇಹಲೋಕ
ಮನಬೀಸಿ ಕರೆಯುತ್ತದೆ