Friday, January 1, 2010

ನವೋದಯ

ಶತಶತಮಾನಗಳು ಸಾಗಿದರೂ
ಹೊಸ ವರುಷವು ಮರಳಿ ಬರುತಿದೆ,
ನಾಡ ಜನರಲಿ ಹರುಷವ ತುಂಬಿ-ತುಂಬಿ
ತರುತಿದೆ|
ವಿಶ್ವದ ಹೊಸ ಜೀವನಕೆ ಹೃತ್ಪೂರ್ವಕ ಸ್ವಾಗತ
ಕೋರುತಿದೆ,
ನವ ಜನಾಂಗದ ಬಾಳಲಿ ನವ-ಜ್ಯೋತಿಯನು
ಬೆಳಗುತಿದೆ||
ಹಿಂದಿನ ಕ್ಷಣವನು ಇತಿಹಾಸದಿ ನೂಕುತ
ಅಟ್ಟಹಾಸದಿ ಮೆರೆಯುತಿದೆ||
ಮಾನವ ಕುಲದ ೨೧ನೇ ಅಧ್ಯಾಯದ
೧೦ನೇ ಪುಟದಿ ಬೆಳಕಿನ ಕಿರಣವ ತೋರುತಿದೆ,
ಹಿಂದಿನ ಪುಟದ ಸರಿ-ತಪ್ಪುಗಳನು ಕತ್ತಲಿನಲಿ
ಮರೆ-ಮಾಚುತಿದೆ||
ಈ ಹೊಸ ಪುಟದಿರುವ ೩೦೦ಅಕ್ಷರ
ಮೇಲರವತ್ತೈದು
ಚಿಹ್ನೆಗಳನು ಕಿಂಚು ತಪ್ಪದೆ ಮುಗಿಸೋಣ,
ಹೊಸ ವರುಷದಿ ಹೊಸ ಜ್ಯಾನಕೆ
ಅರಸುತ ನಾವು ಸಾಗೋಣ;
ಹೊಸ ಜೀವನದಿ ನವ
ನಕ್ಷತ್ರಗಳಂತೆ ಹೊಳೆಯೋಣ,
ವಿಶ್ವದೆಲ್ಲೆಡೆ ಶುಭಾರಂಭವ ಮಾಡೋಣ||