Thursday, July 30, 2009

ಕೆಲವು ಪದಗಳು ನಾನು ತಿಳಿದುಕೊಂಡಂತೆ-

ಅಮ್ಮ - ಅಜರಾಮರ ಮಮತೆಯ ಮಡಿಲು ತುಂಬಿರುವ ಮಾತೆ

ತಂದೆ - ತವರು(ತನ್ನವರು)ಕೇಳಿದ್ದನ್ನೆಲ್ಲ ಈಗಲೇ ತಂದೆ ಎನ್ನುವ,ನಮ್ಮೆಲ್ಲರ ಪಾಲಿಗೆ ದೇವರಾಗಿರುವವ

ಮಗ - ಮರ್ಯಾದೆ,ಮಾತಿನ ಗಣಿಯನು ಗಗನಕ್ಕೆ ಬೆಳೆಸುವಾತ

ಮಗಳು - ಮನೆಯೆಂಬ ಗುಡಿಯಲ್ಲಿ ಹೊಳೆಯುವ ಮಂಗಳ ಜ್ಯೋತಿ

ಗುರು - ಗುಣ ಶ್ರೇಷ್ಠ-ವಿದ್ಯಾ ರತ್ನ,ವಿದ್ಯಾರ್ಥಿಯ ಬಾಳಿನ ಮೆಟ್ಟಿಲೆಂಬ ದಾರಿ

ವಿದ್ಯಾರ್ಥಿ - ವಿದ್ಯೆಯೆಂಬ ಧ್ಯಾನದ ಪರೀಕ್ಷೆಯ ಅಭ್ಯರ್ಥಿ,ವೀರ-ಔದಾರ್ಯಗಳಿಂದ ಅವನು ಭರ್ತಿ

ಮನೆ - ದುರ್ಜನರಿಗೆ ಮನೆಹಾಳು ಕೆಲಸಕ್ಕೆ ದೊರೆತ ನೆಲೆ,
ಸಜ್ಜನರಿಗೆ ಮಾನದಿಂದ ಮನುಷ್ಯನಾಗಿ ಬಾಳಲು ಸಿಕ್ಕ ನೆಲೆಯ ಅಲೆ

ಶಾಲೆ - ಶೃಂಗಾರ ಸಭೆಯಿದು,ಲವಣ ರಾಶಿಯುಂಟು ; ಸಂಸ್ಕೃತಿಯ ಲಗಾಮಿನೊಂದಿಗೆ ಇದರ ನಂಟು

ದೇವರು - ದೇಣಿಗೆಯ ಕೇಳದೆ ಒಳ್ಳೆಯವರಿಗೆ ವರ ಕೊಡುವ ,ಧೈರ್ಯದಿಂದಲಿ ದುರ್ಜನರಿಗೆ ಒದೆಯುವ ಮನುಜ ರತ್ನ

ಸೂರ್ಯ - ಶಾಖ ಕೋಟಿಯಿದ್ದರೂ ಸುಡದ,ರಂಗು-ರಂಗಿನ ಅಮೃತವ ಹಾಲಂತೆ ಚೆಲ್ಲಿ ಸದಾ ಯೌವ್ವನದಿ ಮಿನುಗುತಿರುವ

ಮಾನವ - ಮಾನವೀಯತೆಯನ್ನು ನಿರ್ಮಲ ಮನದಿಂದ ಮನಸಾರೆ ಪೂಜಿಸಿ, ಸದಾ ಅದಕೆ ಶಿರಬಾಗಿ ವಂದಿಸುತ, ಮತ್ತೊಬ್ಬರೆಡೆಗೆ ಸುನಡತೆ ಹೊಂದಿದ, ವನ್ಯ ಮೃಗಗಳನೂ ಸಹ ದಯಯಿಂದ ಕಾಣುವವ

ಹಣ - ಹೆಣವನ್ನು ಉರುಳಿಸಲೂ ಪ್ರಚೋದನೆ ನೀಡುವ, ಕಣ-ಕಣ,ಕ್ಷಣ-ಕ್ಷಣಕ್ಕೂ ದ್ವೇಷ ತುಂಬುವ , ಹೊಂಬೆಳಕಿನ ಕಣ್ಣನ್ನು ಕಣ ಬಿಡದೇ ಕುರುಡುಗೊಳಿಸುವ ಹಾವಿನ ವಿಷದಂತಿರುವುದು

ಗಾಳಿ - ದಿಕ್ಕು-ದೆಸೆ ಇಲ್ಲದೆ ಎಲ್ಲೆಡೆ ಹರಡುವ, ಗೋತ್ರ-ಕುಲ ಕೇಳದೆ ಜೀವದಾನ ನೀಡುವ,ನಯನಕ್ಕೆ ಕಾಣದ, ಕೊನೆಯನ್ನೇ ಹೊಂದಿರದ ವಸ್ತು
ಸಂಜೆ ೬ರಿಂದ ೯ರ ವರೆಗೆ ಹೆಂಡತಿ,
ಟಿ.ವಿ ಮುಂದೆ ಫಿಟ್ಟು
೯ಕ್ಕೆ ಮನೆಗೆ ಬಂದ ಗಂಡ ಫುಲ್ ಟೈಟು.
೧೦ರ ವರೆಗೆ ನಡೆಯುತ್ತದೆ ಅವರ ಫೈಟು
ಗಂಡನಿಗೆ ಆಗ ಬೈಗುಳದ ಏಟು,
ಹೆಂಡತಿ ಜೇಬಿಗೆ ನೂರರ ನೋಟು
ನಂತರ ಅವರದು ಗುಡ್ ನೈಟು !
ಬೆಳೆಗ್ಗೆ ಕಾಫಿ ಒನ್ ಬೈ ಟು
ಮತ್ತೆ ಸಂಜೆ ವರೆಗೆ ಇಬ್ಬರದೂ ಟೂ-ಟೂ
ದಿನಾಲೂ ಇದೇ ರಿಪೀಟೂ........!
ಎಲ್ಲ ಶಾಲೆಗಳ ಪರೀಕ್ಷೆ ಮುಗಿಯಿತು
ಶಾಲಾ-ರಜೆಯದು ಸಂಭ್ರಮದಿ ಶುರುವಾಯಿತು |
ಎಲ್ಲ ಶಾಲೆಗಳು ಘೋಷಿಸಿದವು ರಜೆ
ಅಲ್ಪ ವಿರಾಮ ಕಂಡಿತು ಶಾಲೆಯ ಸಜೆ ||
ಎಲ್ಲರೂ ಮರಳಿದರು ತಮ್ಮ-ತಮ್ಮ ತವರೂರಿಗೆ,
ಆಗಲೇ ಏರುತ್ತಿತ್ತು ಬಿಸಿಲಿನಾ ಬೇಗೆ
ನಮಗಾಗ ಎಲ್ಲಿಲ್ಲದ ಸಂತೋಷ ಸಂಭ್ರಮ
ಎಲ್ಲೆಲ್ಲೂ ಆಟೋಟ ನೋಡು ತಮ್ಮ ||
ಕಳೆದೆವೆರಡು ದಿನ ಬಲು ಆನಂದದಿ,
ಸ್ವರ್ಗ ತಲುಪುತ್ತಿತ್ತು ನಮ್ಮ ಹಾದಿ |
ಮುಂದೆರಡು ದಿನಗಳಲಿ ಮುಂದಿನದರ ಚಿಂತೆ,
ತಲೆಯಲ್ಲಿ ತುಂಬಿತ್ತು ಗೊಂದಲದ ಕಂತೆ ||
ನಂತರದ ದಿನಗಳಲಿ ಫಲಿತಾಂಶದ ನಿರೀಕ್ಷೆ
ಎಲ್ಲರಿಗೂ ಬೇಕಾಗಿತ್ತು ಅಂಕಗಳ ಭೀಕ್ಷೆ |
ವಿಷದಂತೆ ಏರುತ್ತಿತ್ತು ಫಲಿತಾಂಶದ ಕಾವು
ಎಲ್ಲರಿಗೂ ತರುತಲಿತ್ತು ಮಾವು-ಬೇವು ||
ನನ್ನಲ್ಲಿ ಕಾಣುತಿತ್ತು ಆತುರದ ಕಾತುರ
ಫಲಿತಾಂಶ ತಿಳಿದಾಗ ಸಂತಸದ ಬೇಸರ ||
ಮುಂದಿನ ದಿನಗಳಲಿ ಶಾಲೆಗಳ ಹುಡುಕಾಟ
ಶುರುವಾಯಿತಾಗ ವಿದ್ಯಾರ್ಥಿಗಳ ಓಟ |
ಹಲವರು ಸೇರಿ ಚರ್ಚೆ ಮಾಡಿದೆವು,
ಒಳ್ಳೆ ಶಾಲೆಯ ಹುಡುಕಿ ತೆಗೆದೆವು ||
ಶಾಲೆಯೆ ಹೊಕ್ಕಲು ಕಾಯುತ್ತಿತ್ತು ಕಾಲು
ಮುಂದೊಂದು ದಿನ ತೆಗೆಯಿತದರ ಹೆಬ್ಬಾಗಿಲು |
ಕೆಲವರೆಲ್ಲರು ಸೇರಿ ಹೊಕ್ಕೆವು ಗೂಡನ್ನು,
ಅದುವೇ ನಮ್ಮೆಲ್ಲರ ಮನೆ-ಮಂದಿರವಿನ್ನು ||
ಎತ್ತರದ ನೆಲದಲ್ಲಿ ತಂಪಾದ ಸಿರಿ
ಅದುವೆ ನಮ್ಮ ನೆಚ್ಚಿನ ’ವಿದ್ಯಾಗಿರಿ’
ಬಣ್ಣಿಸಲಾಗದು ಅದರ ವಿಶಾಲತೆ,
ನೀವದನು ನೋಡಿದರೆ ಹೊರಡದು ಮಾತೇ !
ಜೀವನದಲ್ಲಿ ಪ್ರೀತಿ ದೊರಕುವುದು ತಂದೆಯಿಂದ
ವಿದ್ಯೆ ಪಡೆವುದು ಗುರುವಿನಿಂದ,
ಆಚಾರ ಸಿಗುವುದು ಧರ್ಮದಿಂದ
ನಡವಳಿಕೆ ಕಲಿಯುವುದು ಸಮಾಜದಿಂದ,
ದಾಹ ತೀರುವುದು ಪಂಚ ಭೂತಗಳಿಂದ,
ಸ್ನೇಹ ಸಿಗುವುದು ಸ್ನೇಹಿತನಿಂದ
ಪ್ರೇಮ ದೊರಕುವುದು ಪ್ರೇಯಸಿಯಿಂದ
ಬಾಳು ನಡೆವುದು ಸಂಗಾತಿಯಿಂದ,
ಆಸರೆ ಸಿಗುವುದು ಮಕ್ಕಳಿಂದ
ಆನಂದ ಸಿಗುವುದು ಮೊಮ್ಮಕ್ಕಳಿಂದ
ಆದರೆ ಇವೆಲ್ಲವೂ ದೊರಕುವುದು ಒಬ್ಬ ತಾಯಿಯಿಂದ
1)
ವಜ್ರ ಕಿರೀಟವದು ಕಂಗೊಳಿಸಲು, ಕೀರ್ತಿ ಕಾರಣ
ಕೀರ್ತಿಯದು ಕಡಲಾಗಲು, ಕಣ್ಕೊರೆವ ಕಿರಣ ಕಾರಣ
ಆ ಕಿರಣ ಹೊರಹೊಮ್ಮಲು ಕಸ್ತೂರಿಯ ಕಂಪು ಬೇಕು
ಕಸ್ತೂರಿ ಕಂಪನ್ನು ಸೂಸಲು ಚೈತನ್ಯ ಬೇಕು
ಚೈತನ್ಯದಿ ಹರ್ಷ ತುಂಬಲು ಸರ್ವ ಮಿಲನವಾಗಬೇಕು



2)
ಕೀರ್ತಿಯೆಂಬ ವಜ್ರದ ಮೂಲಕ
ಕಿರಣವೆಂಬ ಕಸ್ತೂರಿ ಹಾದು ಹೋದಾಗ
ಅದು ಚೈತನ್ಯದಿಂದ ಕಂಗೊಳಿಸುತ್ತದೆಯೇ ಹೊರತು
ತುಕ್ಕು ಹಿಡಿದ ಕಬ್ಬಿಣದಂತೆ ಮುದುಡುವುದಿಲ್ಲ
ಹಾರೈಕೆ-
ತೇಜ ಕಿರಣಗಳು ನಿನ್ನಲಿ ; ಚೈತನ್ಯ ತುಂಬಲಿ
ಆ ನಿನ್ನ ನಸುನಗೆ ನನಗಿರಲಿ,
ಕಸ್ತೂರಿ ಪರಿಮಳದಂತೆ ; ನಿನ್ನ ಕೀರ್ತಿ ಹಬ್ಬಲಿ
ಅದರ ಸುಗಂಧ ಎಂದೂ ಸವೆಯದಿರಲಿ,
ನಿನ್ನ ಬಾಳು ಯಶಸ್ಸುಮಯವಾಗಿರಲೆಂದು
ಹಾರೈಸುವ ನಿನ್ನ ಅಣ್ಣ-ಕಿರಣ

Wednesday, July 15, 2009









Sunday, July 12, 2009






Sunday, July 5, 2009










Thursday, July 2, 2009

1 .