Thursday, July 30, 2009

ಎಲ್ಲ ಶಾಲೆಗಳ ಪರೀಕ್ಷೆ ಮುಗಿಯಿತು
ಶಾಲಾ-ರಜೆಯದು ಸಂಭ್ರಮದಿ ಶುರುವಾಯಿತು |
ಎಲ್ಲ ಶಾಲೆಗಳು ಘೋಷಿಸಿದವು ರಜೆ
ಅಲ್ಪ ವಿರಾಮ ಕಂಡಿತು ಶಾಲೆಯ ಸಜೆ ||
ಎಲ್ಲರೂ ಮರಳಿದರು ತಮ್ಮ-ತಮ್ಮ ತವರೂರಿಗೆ,
ಆಗಲೇ ಏರುತ್ತಿತ್ತು ಬಿಸಿಲಿನಾ ಬೇಗೆ
ನಮಗಾಗ ಎಲ್ಲಿಲ್ಲದ ಸಂತೋಷ ಸಂಭ್ರಮ
ಎಲ್ಲೆಲ್ಲೂ ಆಟೋಟ ನೋಡು ತಮ್ಮ ||
ಕಳೆದೆವೆರಡು ದಿನ ಬಲು ಆನಂದದಿ,
ಸ್ವರ್ಗ ತಲುಪುತ್ತಿತ್ತು ನಮ್ಮ ಹಾದಿ |
ಮುಂದೆರಡು ದಿನಗಳಲಿ ಮುಂದಿನದರ ಚಿಂತೆ,
ತಲೆಯಲ್ಲಿ ತುಂಬಿತ್ತು ಗೊಂದಲದ ಕಂತೆ ||
ನಂತರದ ದಿನಗಳಲಿ ಫಲಿತಾಂಶದ ನಿರೀಕ್ಷೆ
ಎಲ್ಲರಿಗೂ ಬೇಕಾಗಿತ್ತು ಅಂಕಗಳ ಭೀಕ್ಷೆ |
ವಿಷದಂತೆ ಏರುತ್ತಿತ್ತು ಫಲಿತಾಂಶದ ಕಾವು
ಎಲ್ಲರಿಗೂ ತರುತಲಿತ್ತು ಮಾವು-ಬೇವು ||
ನನ್ನಲ್ಲಿ ಕಾಣುತಿತ್ತು ಆತುರದ ಕಾತುರ
ಫಲಿತಾಂಶ ತಿಳಿದಾಗ ಸಂತಸದ ಬೇಸರ ||
ಮುಂದಿನ ದಿನಗಳಲಿ ಶಾಲೆಗಳ ಹುಡುಕಾಟ
ಶುರುವಾಯಿತಾಗ ವಿದ್ಯಾರ್ಥಿಗಳ ಓಟ |
ಹಲವರು ಸೇರಿ ಚರ್ಚೆ ಮಾಡಿದೆವು,
ಒಳ್ಳೆ ಶಾಲೆಯ ಹುಡುಕಿ ತೆಗೆದೆವು ||
ಶಾಲೆಯೆ ಹೊಕ್ಕಲು ಕಾಯುತ್ತಿತ್ತು ಕಾಲು
ಮುಂದೊಂದು ದಿನ ತೆಗೆಯಿತದರ ಹೆಬ್ಬಾಗಿಲು |
ಕೆಲವರೆಲ್ಲರು ಸೇರಿ ಹೊಕ್ಕೆವು ಗೂಡನ್ನು,
ಅದುವೇ ನಮ್ಮೆಲ್ಲರ ಮನೆ-ಮಂದಿರವಿನ್ನು ||
ಎತ್ತರದ ನೆಲದಲ್ಲಿ ತಂಪಾದ ಸಿರಿ
ಅದುವೆ ನಮ್ಮ ನೆಚ್ಚಿನ ’ವಿದ್ಯಾಗಿರಿ’
ಬಣ್ಣಿಸಲಾಗದು ಅದರ ವಿಶಾಲತೆ,
ನೀವದನು ನೋಡಿದರೆ ಹೊರಡದು ಮಾತೇ !

No comments:

Post a Comment