Thursday, November 1, 2012

ಕಳೆದು ಹೋದ ಸಾಲುಗಳು ಮತ್ತೆ ದೊರೆತಾಗ-

ಮನಸ್ಸಿನ ಮನವೊಲಿದರೆ ಸಾಧನೆಗಳವು ಹತ್ತು ; ಆದರೆ ನನ್ನ ಮನವದು-ನನ್ನದಲ್ಲದ ಸ್ವತ್ತು
ಕಳೆದು ಹೋದ ಸಾಲುಗಳು ಮತ್ತೆ ದೊರೆತಾಗ-

ಸರಿದು ಹೋದ ಹಿಂದಿನ ವರ್ಷದ ಸರಿ-ತಪ್ಪುಗಳನು
ಕಾಲವೆಂಬ ಕತ್ತಲೆಯಲಿ ಮರೆಮಾಚಿ;
ಹದಿನಾರರ ಯೌವ್ವನದಂತೆ ಹದವಾಗಿರುವ ಹೊಸವರ್ಷಕ್ಕೆ,
ಹಸಿರಾದ ಮನಸು-ನವಿರಾದ ಕನಸುಗಳೊಂದಿಗೆ ಸವಿಯಾಗಿ ಬೆರೆಯಿರಿ.
ಸಂತೃಪ್ತಿಯ ಚಿಗುರಿನೊಂದಿಗೆ ಸಂತಸದ ವಸಂತ ಸಂಭ್ರ್ಮಮ ನಿಮ್ಮದಾಗಲಿ.
ಹೊಸ ವರ್ಷವು ನಿಮಗೆಲ್ಲ ಹಳೆತನದ ಹಾದಿಯಲಿ ಹೊಸತನದ ಹೂವಾಗಲಿ.

ಹೀಗೊಂದು ಅನಿಸಿಕೆ-

ಇಂಗ್ಲೀಷ್ ಸಂಗೀತವದು ನಡುರಾತ್ರಿ ನಶೆಯಂತೆ,
ಅಮಲಿರುವವರೆಗೂ ಸ್ವರ್ಗದಲ್ಲೇ ಆಲಾಪ;
ಅಮಲಿಳಿದ ಮೇಲೆ ಕೋಲೆ ಭೂತದ ಸ್ವರೂಪ !!

ಕನ್ನಡ ಕವನಗಳು ಮಲೆನಾಡಿನ ಮಳೆಯಂತೆ-ಎಂದಿಗೂ ಮಾಸದ ಕಂಪು
ಹುಯ್ಯುವಾಗ ಗುಡುಗು-ಸಿಡಿಲಿನ ಆರ್ಭಟ,
ಹಸಿರು ಹಾಸಿನ ನಡುವೆ ಜಲಧಾರೆಯಾಟ;
ಮಳೆ ನಿಂತರೂ ನಿಲ್ಲದ ಹನಿಗಳ ಚಟಪಟ,
ಮರ-ಬಳ್ಳಿಯ ಮುತ್ತಿಕುವ ಹನಿಗಳಂತೆ-ಎಂದೆಂದಿಗೂ ಮರೆಯದ ಚಿತ್ರಪಟ