ಕೆಲವು ಪದಗಳು ನಾನು ತಿಳಿದುಕೊಂಡಂತೆ-
ಅಮ್ಮ - ಅಜರಾಮರ ಮಮತೆಯ ಮಡಿಲು ತುಂಬಿರುವ ಮಾತೆ
ತಂದೆ - ತವರು(ತನ್ನವರು)ಕೇಳಿದ್ದನ್ನೆಲ್ಲ ಈಗಲೇ ತಂದೆ ಎನ್ನುವ,ನಮ್ಮೆಲ್ಲರ ಪಾಲಿಗೆ ದೇವರಾಗಿರುವವ
ಮಗ - ಮರ್ಯಾದೆ,ಮಾತಿನ ಗಣಿಯನು ಗಗನಕ್ಕೆ ಬೆಳೆಸುವಾತ
ಮಗಳು - ಮನೆಯೆಂಬ ಗುಡಿಯಲ್ಲಿ ಹೊಳೆಯುವ ಮಂಗಳ ಜ್ಯೋತಿ
ಗುರು - ಗುಣ ಶ್ರೇಷ್ಠ-ವಿದ್ಯಾ ರತ್ನ,ವಿದ್ಯಾರ್ಥಿಯ ಬಾಳಿನ ಮೆಟ್ಟಿಲೆಂಬ ದಾರಿ
ವಿದ್ಯಾರ್ಥಿ - ವಿದ್ಯೆಯೆಂಬ ಧ್ಯಾನದ ಪರೀಕ್ಷೆಯ ಅಭ್ಯರ್ಥಿ,ವೀರ-ಔದಾರ್ಯಗಳಿಂದ ಅವನು ಭರ್ತಿ
ಮನೆ - ದುರ್ಜನರಿಗೆ ಮನೆಹಾಳು ಕೆಲಸಕ್ಕೆ ದೊರೆತ ನೆಲೆ,
ಸಜ್ಜನರಿಗೆ ಮಾನದಿಂದ ಮನುಷ್ಯನಾಗಿ ಬಾಳಲು ಸಿಕ್ಕ ನೆಲೆಯ ಅಲೆ
ಶಾಲೆ - ಶೃಂಗಾರ ಸಭೆಯಿದು,ಲವಣ ರಾಶಿಯುಂಟು ; ಸಂಸ್ಕೃತಿಯ ಲಗಾಮಿನೊಂದಿಗೆ ಇದರ ನಂಟು
ದೇವರು - ದೇಣಿಗೆಯ ಕೇಳದೆ ಒಳ್ಳೆಯವರಿಗೆ ವರ ಕೊಡುವ ,ಧೈರ್ಯದಿಂದಲಿ ದುರ್ಜನರಿಗೆ ಒದೆಯುವ ಮನುಜ ರತ್ನ
ಸೂರ್ಯ - ಶಾಖ ಕೋಟಿಯಿದ್ದರೂ ಸುಡದ,ರಂಗು-ರಂಗಿನ ಅಮೃತವ ಹಾಲಂತೆ ಚೆಲ್ಲಿ ಸದಾ ಯೌವ್ವನದಿ ಮಿನುಗುತಿರುವ
ಮಾನವ - ಮಾನವೀಯತೆಯನ್ನು ನಿರ್ಮಲ ಮನದಿಂದ ಮನಸಾರೆ ಪೂಜಿಸಿ, ಸದಾ ಅದಕೆ ಶಿರಬಾಗಿ ವಂದಿಸುತ, ಮತ್ತೊಬ್ಬರೆಡೆಗೆ ಸುನಡತೆ ಹೊಂದಿದ, ವನ್ಯ ಮೃಗಗಳನೂ ಸಹ ದಯಯಿಂದ ಕಾಣುವವ
ಹಣ - ಹೆಣವನ್ನು ಉರುಳಿಸಲೂ ಪ್ರಚೋದನೆ ನೀಡುವ, ಕಣ-ಕಣ,ಕ್ಷಣ-ಕ್ಷಣಕ್ಕೂ ದ್ವೇಷ ತುಂಬುವ , ಹೊಂಬೆಳಕಿನ ಕಣ್ಣನ್ನು ಕಣ ಬಿಡದೇ ಕುರುಡುಗೊಳಿಸುವ ಹಾವಿನ ವಿಷದಂತಿರುವುದು
ಗಾಳಿ - ದಿಕ್ಕು-ದೆಸೆ ಇಲ್ಲದೆ ಎಲ್ಲೆಡೆ ಹರಡುವ, ಗೋತ್ರ-ಕುಲ ಕೇಳದೆ ಜೀವದಾನ ನೀಡುವ,ನಯನಕ್ಕೆ ಕಾಣದ, ಕೊನೆಯನ್ನೇ ಹೊಂದಿರದ ವಸ್ತು
No comments:
Post a Comment