1)
ವಜ್ರ ಕಿರೀಟವದು ಕಂಗೊಳಿಸಲು, ಕೀರ್ತಿ ಕಾರಣ
ಕೀರ್ತಿಯದು ಕಡಲಾಗಲು, ಕಣ್ಕೊರೆವ ಕಿರಣ ಕಾರಣ
ಆ ಕಿರಣ ಹೊರಹೊಮ್ಮಲು ಕಸ್ತೂರಿಯ ಕಂಪು ಬೇಕು
ಕಸ್ತೂರಿ ಕಂಪನ್ನು ಸೂಸಲು ಚೈತನ್ಯ ಬೇಕು
ಚೈತನ್ಯದಿ ಹರ್ಷ ತುಂಬಲು ಸರ್ವ ಮಿಲನವಾಗಬೇಕು
2)
ಕೀರ್ತಿಯೆಂಬ ವಜ್ರದ ಮೂಲಕ
ಕಿರಣವೆಂಬ ಕಸ್ತೂರಿ ಹಾದು ಹೋದಾಗ
ಅದು ಚೈತನ್ಯದಿಂದ ಕಂಗೊಳಿಸುತ್ತದೆಯೇ ಹೊರತು
ತುಕ್ಕು ಹಿಡಿದ ಕಬ್ಬಿಣದಂತೆ ಮುದುಡುವುದಿಲ್ಲ
No comments:
Post a Comment