ದೇಶ-ಕೋಶ
ದೇಶ ಸುತ್ತಿ ನೋಡೆಂದರು;ಸುತ್ತಿ ಸುಳಿದಾಡುವದರಲ್ಲಿಯೇ ಸಮಯ ಸವೆಸಿದೆ- ಸುಸ್ತಾದೆ,
ಪರರು ಹುಬ್ಬೇರಿಸಿ ನೋಡುವಂತದ್ದನ್ನೇನೂ ನಾ ಮಾಡಲಿಲ್ಲ |
ಕೋಶ ಓದೆನ್ನುವದ ಕೇಳಿ;ಕೋಶಗಳ ಕೆದಕುವದರಲ್ಲಿಯೇ ಮಾಡಿದೆ ಕಾಲಹರಣ,
ನಾಕು ಸಾಲು ಗೀಚಲಾಗಲಿಲ್ಲ; ಅದುವೆನಾ ಕಾರಣ? ||
ಬರೀ ದೇಶ ಸುತ್ತಾಡಿದರೆ ಸಾಕಾ?;
ಕಂಡದ್ದೆಲ್ಲವ ಕೂಡಿಸಿ, ದೇಶವೇ ನೋಡುವಂತೆ ಏನಾದರೂ ಮಾಡಬೇಕಾ? |
ಕುರುಡನಂತೆ ಕೋಶಗಳ ಕೈಯ್ಯಾಡಿಸಿದರೆ ಮುಗಿಯಿತೇ?;
ಕೆಲವರಾದರೂ ಕನ್ನಾಡಿಸುವಂತೆ ಬರೆಯಬಾರದೇ, ಕತೆ-ಕವಿತೆ? ||
ದೇಶ ಸುತ್ತಿ ಬಂದ ಧಿಮಾಕಿನ ಜೊತೆ ಇರಲಿ ಸುತ್ತಿ ಬಂದ ದೇಶದ ಧಿಮಾಕು;
ಧಿಮಾಕದು ಹೊಸತನದ ಚಿಗುರಿನ ಚಿಲುಮೆಯಾಗಬೇಕು |
ಕೋಶ ಓದುವದಲ್ಲ; ಓದಿ ಗ್ರಹಿಸುವದಷ್ಟೇ ಅಲ್ಲ;
ಗ್ರಹಿಸಿದುದ ಜೀವನದಿ ಗುಣಿಸಿದಾಗಲೇ ಗೆಲುವು, ಇಲ್ಲದಿರೆ ಎನಿಲ್ಲ ಓದಿ ಫಲವು ||
No comments:
Post a Comment